ಕರ್ನಾಟಕ ರಾಜ್ಯೋತ್ಸವದ ವಿಶೇಷ | ಕರ್ನಾಟಕ ಏಕೀಕರಣ ಇತಿಹಾಸ Vol 1| ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ಇತಿಹಾಸ
ಎಲ್ಲಾ ಸ್ಪರ್ಧಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು, ಈ ಶುಭದಿನ ನಮ್ಮೆಲ್ಲರ ತಾಯಿನಾಡು ರಚನೆಯಾದ ದಿನ. ಇಂತಹ ಸಂದರ್ಭದಲ್ಲಿ ನಾಡಿನ ಪ್ರತಿಯೊಬ್ಬ ನಾಗರಿಕನು ಮತ್ತು ಸ್ಪರ್ಧಾರ್ಥಿಗಳು ತಿಳಿದುಕೊಳ್ಳಬೇಕಾದಂತ ವಿಷಯ ಕರ್ನಾಟಕ ಏಕೀಕರಣದ ಇತಿಹಾಸ. ಕಾರಣ ಸ್ವತಂತ್ರ ಹೋರಾಟದ ಇತಿಹಾಸದ ಜೊತೆಗೆ ಹೆಜ್ಜೆ ಹಾಕಿದ ಚಳವಳಿ ಕರ್ನಾಟಕ ಏಕೀಕರಣ, ಇಪ್ಪತ್ತಕ್ಕೂ ಹೆಚ್ಚು ಪ್ರಾಂತಗಳಲ್ಲಿ ಹರಿದು ಹಂಚು ಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು ಒಗ್ಗೂಡಿ ಒಂದು ಕರ್ನಾಟಕ ರಾಜ್ಯ ( ಮೈಸೂರು ರಾಜ್ಯ ) ರಚನೆಗೆ ಅನೇಕ ಧೀಮಂತ ನಾಯಕರುಗಳ ಹೋರಾಟ ಚಳುವಳಿಗಳು ನಮಗೆ ಇಂದು ಕರ್ನಾಟಕದ ಕನ್ನಡ ಮಾತನಾಡುವ ಜನರಿಗೆ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆಡಳಿತವಾಗಿ ಏಕರೂಪತೆಯನ್ನು ತಂದುಕೊಟ್ಟಿದೆ. ಇಂತಹ ಶುಭದಿನದಂದು ಈ ಏಕರೂಪತೆಯ ನಾಡಿನ ಸ್ಥಾಪನೆಗೆ ಶ್ರಮಿಸಿದ ನಾಯಕರುಗಳನ್ನು ಮತ್ತು ಅವರು ಮಾಡಿದ ತ್ಯಾಗ ಮನೋಭಾವನೆ ಹೋರಾಟಗಳನ್ನು ಪ್ರತಿಯೊಬ್ಬ ಕನ್ನಡಿಗ ಮತ್ತು ಸ್ಪರ್ಧಾರ್ಥಿಗಳ ತಿಳಿದುಕೊಳ್ಳುವುದು ಅತ್ಯವಶ್ಯಕತವಾಗಿದೆ. ನಮ್ಮ ಚಾನಲ್ ನಲ್ಲಿ ಈ ವಿಷಯದ ಕುರಿತು 2 ಸಂಚಿಕೆಗಳ ಮೂಲಕ ನಿಮ್ಮೊಂದಿಗೆ ಬರಲಿದ್ದೇವೆ. ಈ ಎರಡು ಸಂಚಿಕೆಗಳ ವಿಡಿಯೋಗಳನ್ನು ಪ್ರತಿಯೊಬ್ಬ ಸ್ಪರ್ಧಾ ಮಿತ್ರರು ಮತ್ತು ಕನ್ನಡಿಗರು ತಿಳಿದುಕೊಳ್ಳಬೇಕಾಗಿರುವಂತಹ ಮಹತ್ವದ ವಿಷಯಗಳು ಹೊಂದಿರುತ್ತವೆ.
11/1/20241 min read
Empowering educational journeys.